ಮಣ್ಣಿನ ಚಿಕಿತ್ಸೆ 2

ಮಣ್ಣಿನ ಚಿಕಿತ್ಸೆ

ಭಾರತೀಯ ಸಂಸ್ಕೃತಿಯಲ್ಲಿ ಭೂ ತಾಯಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯಿದೆ. ರೈತರ ಪಾಲಿಗೆ ಮಣ್ಣು ಚಿನ್ನಕ್ಕಿಂತ ಅಮೂಲ್ಯವಾದುದು. ಪುರಾಣಗಳಲ್ಲಿ ಹುತ್ತದ ಮಣ್ಣಿನ ಲೇಪನದಿಂದ ಗುಣವಾದ ಹಲವಾರು ಚರ್ಮರೋಗಗಳ ಬಗ್ಗೆ ಉಲ್ಲೇಖವಿದೆ. ಆಯುರ್ವೇಧದ ಚಿಕಿತ್ಸೆಯಲ್ಲೂ ಹುತ್ತದ ಮಣ್ಣು ಮತ್ತು ಕಪ್ಪು ಮಣ್ಣು ಪ್ರಮುಖ ಸ್ಥಾನ ಪಡೆದಿದೆ. ಹುತ್ತದ ಮಣ್ಣನ್ನು ಚರ್ಮವ್ಯಾದಿಗಳಿಗೆ ವಿಶೇಷವಾಗಿ ಬಳಸಿದರೆ ಕಪ್ಪು ಮಣ್ಣು ಸೂರ್ಯನ ಕಿರಣಗಳ ಶಕ್ತಿಯನ್ನು ದೇಹಕ್ಕೆ ವರ್ಗಾಯಿಸುವ ಮತ್ತು ದೇಹದಿಂದ ಅಧಿಕ ಉಷ್ಣಾಂಶವನ್ನು ಹೀರುವ ಅಗಾಧ ಶಕ್ತಿ ಹೊಂದಿದೆ. ಹಾಗಾಗಿ ಹಲವು ರೋಗಗಳನ್ನು ಗುಣಪಡಿಸಲು ಮತ್ತು ಆರೋಗ್ಯವಂತ ವ್ಯಕ್ತಿಗಳಲ್ಲಿ ಚರ್ಮದ ತ್ವಚೆಯನ್ನು ಕಾಪಾಡಿಕೊಳ್ಳಲು ಈ ಚಿಕಿತ್ಸೆ ಸಹಕಾರಿಯಾಗಿದೆ.

ಚಿಕಿತ್ಸೆಗೆ ಯಾವ ಮಣ್ಣನ್ನು ಬಳಸಲಾಗುತ್ತದೆ?

ಚಿಕಿತ್ಸೆಗೆ ಬಳಸುವ ಮಣ್ಣನ್ನು ಆಯ್ಕೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದಿರಬೇಕು. ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಪ್ರದೇಶದಿಂದ ಮಣ್ಣನ್ನು ಆಯ್ಕೆ ಮಾಡುವುದು ಮುಖ್ಯವಾದ ಸಂಗತಿ. ಕಾರಣ ಕಪ್ಪು ಮಣ್ಣು ಹೊಂದಿರುವ ಹೊಲ ಗದ್ದೆ, ತೋಟಗಳಲ್ಲಿ ಫಸಲಿನ ವೃದ್ಧಿಗಾಗಿ ಅನೇಕ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ. ಅಲ್ಲದೆ ಫಸಲಿನ ಸಂರಕ್ಷಣೆಗಾಗಿ ಕೀಟನಾಶಕಗಳನ್ನು ಬಳಸುವುದರಿಂದ ಆ ಮಣ್ಣನ್ನು ಚಿಕಿತ್ಸೆಗೆ ಬಳಸಲು ಸಾಧ್ಯವಿಲ್ಲ. ಭೂಮಿಯ ಮೇಲ್ಮೆöÊಯಿಂದ ಮೂರು ಅಥವಾ ನಾಲ್ಕು ಅಡಿ ಆಳದಿಂದ ತೆಗೆದ ಮಣ್ಣಿನಲ್ಲಿ ಯಾವುದೇ ರಾಸಾಯನಿಕಗಳಿರುವ ಸಾಧ್ಯತೆ ಕಡಿಮೆಯಿರುವ ಕಾರಣ ಆ ಮಣ್ಣನ್ನು ಚಿಕಿತ್ಸೆಗೆ ಬಳಸಬಹುದು. ಈ ರೀತಿ ಹೊರ ತೆಗೆದ ಮಣ್ಣಿನಿಂದ ಬೇರು, ಕಲ್ಲುಗಳು ಮುಂತಾದ ಕಲ್ಮಶಗಳನ್ನು ಹೊರ ತೆಗೆದು ಮಣ್ಣನ್ನು ಶುದ್ಧೀಕರಿಸ ಬೇಕು. ನಂತರ ಮಣ್ಣನ್ನು ನೆನೆಹಾಕಿ ಮಾರನೆ ದಿನ ಮುಖ, ಕಣ್ಣು, ಹೊಟ್ಟೆಯ ಭಾಗಗಳಿಗೆ ಲೇಪಿಸಬಹುದು.

ಚಿಕಿತ್ಸಾ ವಿಧಾನ: ಹದವಾಗಿ ನೆನೆಸಿಟ್ಟ ಮಣ್ಣನ್ನು ಅಗತ್ಯಕ್ಕೆ ತಕ್ಕಂತೆ ದೇಹದ ಕೆಲವು ಭಾಗಗಳಿಗೆ ಲೇಪಿಸಬಹುದು. ಪೂರ್ಣ ಮಣ್ಣಿನ ಸ್ನಾಹದಲ್ಲಿ ದೇಹದ ಎಲ್ಲಾ ಭಾಗಗಳಿಗೂ ಮಣ್ಣನ್ನು ಲೇಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಣ್ಣು, ಮೂಗು, ಕಿವಿಯ ಒಳಭಾಗಕ್ಕೆ ಮಣ್ಣು ಸೇರದಂತೆ ಎಚ್ಚರವಹಿಸಬೇಕು. ಮಣ್ಣನ್ನು ಲೇಪಿಸಿದ ೪೫ ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ ನಿಂತು ನಂತರ ತಣ್ಣೀರಿನ ಸ್ನಾನ ಮಾಡಬಹುದು.

ಮಣ್ಣಿನ ಚಿಕಿತ್ಸೆಯಿಂದಾಗುವ ಪ್ರಯೋಜನಗಳಾವುವು?

ಕಪ್ಪು ಮಣ್ಣು ದೇಹದಲ್ಲಿ ಉತ್ಪತ್ತಿಯಾಗುವ ಅಧಿಕ ಉಷ್ಣಾಂಗವನ್ನು ಹೀರುವುದರಿಂದ ಅಧಿಕ ತಾಪಮಾನದಿಂದುAಟಾಗುವ ತೊಂದರೆಗಳಿಗೆ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಚರ್ಮದಲ್ಲಿರುವ ಅಧಿಕ ಜಿಡ್ಡಿನಾಂಶವನ್ನು ದೂರ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮೊಡವೆಗಳಿಂದ ತೊಂದರೆಗೊಳಗಾದವರಿಗೆ ಇದು ಅತ್ಯತ್ತುಮ ಚಿಕಿತ್ಸೆಯಾಗಿದೆ. ಚರ್ಮದ ರೋಗಗಳಲ್ಲಿ ಮುಖ್ಯವಾದ ಸೋರಿಯಾಸಿಸ್‌ನ ನಿವಾರಣೆಗೆ ಇದು ಅತ್ಯುಪಯುಕ್ತ. ಹೊಟ್ಟೆಯ ಮೇಲಿನ ಮಣ್ಣಿನ ಲೇಪನವು ಹೊಟ್ಟೆಯ ಸ್ನಾಯುಗಳನ್ನು ಉದ್ರೇಕಿಸಿ ಸಣ್ಣ ಕರುಳಿನ ಕಾರ್ಯತತ್ಪರತೆಯನ್ನು ಹೆಚ್ಚಿಸುವುದರಿಂದ ಅಸಿಡಿಟಿ ಅಜೀರ್ಣದಂತಹ ತೊಂದರೆಗಳಿAದ ನಿವಾರಣೆ ಸಾಧ್ಯ. ಮಣ್ಣಿನ ಸ್ನಾನವು ದೇಹದಲ್ಲಿ ರಕ್ತ ಚಲನೆಯನ್ನು ಹೆಚ್ಚಿಸಿ ಮಾಂಸ ಖಂಡಗಳಲ್ಲಿರಬಹುದಾದ ಒತ್ತಡವನ್ನು ಕಡಿಮೆ ಮಾಡಿ ಮಾಂಸ ಖಂಡಗಳನ್ನು ಉತ್ತಮಗೊಳಿಸುತ್ತದೆ.

ಈ ಚಿಕಿತ್ಸೆಯು ಮಿತವ್ಯಯಿಯಾಗಿದ್ದು ಇದಕ್ಕೆ ತಗುಲುವ ವೆಚ್ಚ ಅತ್ಯಂತ ಕಡಿಮೆ, ಹಾಗೂ ಈ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಈ ಚಿಕಿತ್ಸೆಯನ್ನು ರೂಡಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ಅನಗತ್ಯ ಔಷಧಿಗಳ ಅಡ್ಡ ಪರಿಣಾಮಗಳಿಂದಲೂ ಕೂಡ ದೂರ ಉಳಿಯಬಹುದು.