ಚೇಳುಗಳು ಮತ್ತು ಚೇಳಿನ ವಿಷದ ಬಗ್ಗೆ ತಿಳಿಸಿಕೊಡಿ
ವಿಷ ಸಂಕುಲ ಚೇಳು:
ಪ್ರಾಣಿ ಜಗತ್ತು ವೈವಿಧ್ಯಮಯ ಪ್ರಾಣಿ ಸಂಕುಲದ ಆಗರ. ಚೇಳು ಸಂಧಿಪದಿ ಗುಂಪಿನ ಅರಕಿನಿಡ್ ವರ್ಗಕ್ಕೆ ಸೇರಿರುವ ವಿಷಕಾರಿ ಜೀವಜಂತು. ಆಂಗ್ಲ ಭಾಷೆಯಲ್ಲಿ, ಸ್ಕೂರ್ಪಿಯನ್ ಎನ್ನುತ್ತಾರೆ. ಚೇಳು ಎಂದಾಕ್ಷಣ ಒಂದುಕ್ಷಣ ಜೀವ ಝಲ್ ಎನ್ನುತ್ತದೆ. ಆದರ ಆಕಾರ, ವಿಷದಕೊಂಡಿ ನೆನಪಿಸಿಕೊಂಡರೆ ಎಂಧವರು ಸಹ ಹೌಹಾರುತ್ತಾರೆ. ಚೇಳಿನ ದೇಹ ರಚನೆ, ವಾಸಸ್ಥಳ, ಆಹಾರ ಹುಡುಕುವ ಕ್ರಿಯೆ ಮತ್ತು ಸಂತಾನ ಕ್ರಿಯೆಗಳು ವಿಶಿಷ್ಠವಾಗಿವೆ. ಉಷ್ಣವಲಯದ ವಿವಿಧ ದೇಶಗಳಲ್ಲಿ ವಾಸಿಸಲ್ಛಿಸುವ ಚೇಳುಗಳಲ್ಲಿ ಹಲವು ಬಗೆ; ಇವು ನಿಶಾಚರಿಗಳು, ಪ್ರಮುಖವಾದವುಗಳೆಂದರೆ: ಕೊಂಬು ಚೇಳು ಮತ್ತು ಸಾಮಾನ್ಯ ಚೇಳು, ಬೃಹತ್ ಗಾತ್ರದ ಕೊಂಬು ಚೇಳುಗಳು ಉತ್ತರ ಆಫ್ರಿಕಾ, ಏಷ್ಯಾ, Australia ಮತ್ತು ಅಮೇರಿಕದ ಕಾಡು-ಮೇಡುಗಳಲ್ಲಿ ವಾಸಿಸುತ್ತವೆ. ಸಾಮಾನ್ಯ ಚೇಳುಗಳು ಗಾತ್ರದಲ್ಲಿ ಕೊಂಬು ಚೇಳುಗಳಿಗಿಂತ ಚಿಕ್ಕದಾಗಿದ್ದು, ಸಾಮಾನ್ಯವಾಗಿ ೦.೫ ಸೆಂ.ಮೀ. ನಿಂದ ೧೬ ಸೆಂ.ಮೀ. ಉದ್ದವಾಗಿರುತ್ತವೆ. ಕೆಲವು ಜಾತಿಯ ಚೇಳುಗಳು ೮ ಇಂಚು ಉದ್ದವಿರುವ ದೇಹವನ್ನು ಹೊಂದಿವೆ.
ಹಿಂದು ಪಂಚಾಂಗದಲ್ಲಿ ಚೇಳಿಗೆ ಸ್ಥಾನವಿದೆ. ವೃಶ್ಚಿಕ ರಾಶಿಯನ್ನು ಚೇಳಿನ ಚಿನ್ಹೆಯಿಂದ ಗುರುತಿಸುತ್ತಾರೆ. ಚೇಳಿನ ದೇಹ ವಿಶೇಷವಾಗಿದೆ. ದೇಹ ರಚನೆಯು ಪ್ರಮುಖವಾಗಿ ಎರಡು ಭಾಗಗಳಿಂದ ಕೂಡಿದೆ. ತಲೆ ಮತ್ತು ಎದೆ ಸೇರಿ “ಸೆಪಲೊ ತೂರೆಕ್ಸ್” (cephalothorax) ಮತ್ತು ಉದರ (abdomen) ಚೇಳಿನ ದೇಹದ ಮುಖ್ಯ ಭಾಗಗಳು. ಸೆಪಲೊ ತೂರೆಕ್ಸ್ ೬ ಖಂಡಗಳಿಂದ ಕೂಡಿದ ಶಿರೋರ, ಉದರ ೧೨ ಖಂಡಗಳಿAದ ಕೂಡಿದ ಉದರ ಮತ್ತು ಹೊಟ್ಟೆಯ ಭಾಗವು ವಿಶೇಷವಾಗಿದ್ದು, ತುದಿಯಲ್ಲಿ ೫ ಖಂಡಗಳಿAದ ಕೂಡಿದ ಉದ್ದನೆಯ ಕಡ್ಡಿಯಂತಿರುವ ಭಾಗ ತುದಿಯಲ್ಲಿ ಮೊನಚಾದ ವಿಷಪೂರಿತ ಕೊಂಡಿ ಇದೆ. ಯುದ್ದಕ್ಕೆ ಸಜ್ಜಾಗಿ ನಿಂತಿರುವ ಕೋವಿ ಹಿಡಿದ ಸಿಪಾಯಿಯಂತೆ ತನ್ನ ಹೊಟ್ಟೆಯ ತುದಿಯಲ್ಲಿರುವ ವಿಷಪೂರಿತ ಕೊಂಡಿಯನ್ನು ಸದಾ ಬೆನ್ನ ಮೇಲೆ ಎತ್ತಿ ಹಿಡಿದಿರುತ್ತದೆ. ಕೆಲವು ಪ್ರಭೇದದ ಚೇಳುಗಳು ಹೊಟ್ಟೆಯ ತುದಿಯಲ್ಲಿ ಎರಡು ಕಡ್ಡಿಯಂತಿರುವ, ವಿಷದ ಕೊಂಡಿಗಳನ್ನೊಳಗೊAಡ ಬಾಲದಂತಹ ಅಂಗಾಂಗವನ್ನು ಹೊಂದಿವೆ. ಗಂಡು-ಹೆಣ್ಣು ಚೇಳುಗಳ ಪ್ರಣಯಭಂಗಿ ಕೌತುಕವಾಗಿದ್ದು, ಸಂಭೋಗದಲ್ಲಿ ಕೊನೆಗೊಳ್ಳುತ್ತದೆ. ಸಂಭೋಗಾನಂತರ ಹೆಣ್ಣು, ಗಂಡು ಚೇಳನ್ನು ತಿನ್ನುತ್ತದೆ. ಪ್ರತಿ ಹೆಣ್ಣು ಚೇಳು ೩ ರಿಂದ ೩೪ ಮರಿ ಚೇಳುಗಳಿಗೆ ಜನ್ಮ ನೀಡುತ್ತದೆ. ಈ ಮರಿಗಳು ಬೆಳೆದು, ತಮ್ಮ ಆಹಾರವನ್ನು ತಾವೇ ಹುಡುಕುವ ಸಾಮರ್ಥ್ಯ ಹೊಂದುವವರೆಗೂ ತಾಯಿ ಚೇಳಿನ ಬೆನ್ನ ಮೇಲೆ ಆಶ್ರಯ ಪಡೆಯುತ್ತವೆ. ಹೀಗಾಗಿ, ಹೆಣ್ಣು ಚೇಳು ತಾನು ಹೆತ್ತ ಮರಿಗಳಿಗೆ ಶೂಶ್ರೂಷೆ ಮಾಡಿ, ಪೋಶಿಷಸಲು ತನ್ನ ದೇಹವನ್ನು ತ್ಯಾಗ ಮಾಡುತ್ತದೆ. ಕೆಲವು ಬಾರಿ ಮರಿ ಚೇಳುಗಳು ತಾಯಿಯ ದೇಹವನ್ನು ಆಹಾರವನ್ನಾಗಿಸಿ ಕೊಳ್ಳುತ್ತವೆ!!.
ಚೇಳಿನ ವಿಷ ಬಲ್ಲವರೇ ಬಲ್ಲರು. ಚೇಳು ಕುಟುಕುತ್ತದೆ. ಕಚ್ಚುವುದಿಲ್ಲ. ದೇಹದ ಹೊಟ್ಟೆಯ ಹಿಂಬದಿಯಲ್ಲಿನ ವಿಷಕೊಂಡಿಯಿಂದ ಕುಟುಕುವಾಗ ವಿಷವನ್ನು ವಿಷಗ್ರಂಥಿಯಿAದ ಹೊರಹಾಕುತ್ತದೆ. ಈ ವಿಷವು ಪ್ರಭೇಧಗಳಿಗನುಗುಣವಾಗಿ ವಿಭಿನ್ನ ರೀತಿಯಲ್ಲಿ ಮಾನವ ಸೇರಿದಂತೆ ಇನ್ನಿತರ ಪ್ರಾಣಿಗಳ ದೇಹದಲ್ಲಿ ಕೆಲಸ ಮಾಡುತ್ತದೆ. ಕೆಲವು ಪ್ರಭೇಧದ ಚೇಳುಗಳ ವಿಷ ನೇರವಾಗಿ ನರವ್ಯೂಹ ಮತ್ತು ನರ ಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಚೇಳು ಕುಟುಕಿದಾಗ ಯಾವುದೇ ಚರ್ಮದ ಊತ, ಬಣ್ಣ ಬದಲಾವಣೆಯಾಗುವುದಿಲ್ಲ. ಆದರೆ ಸ್ವಲ್ಪ ನೋವು ಉಂಟಾಗಿ, ಸುಟ್ಟಾಗ ಉಂಟಾಗುವ ನೋವಿನ ಅನುಭವವಾಗುತ್ತದೆ. ಆದರೆ ವಿಷಕಾರಿಯಲ್ಲದ ಚೇಳು ಕುಟುಕಿದಾಗ ಚರ್ಮದ ಊತ ಮತ್ತು ಬಣ್ಣ ಬದಲಾವಣೆಯಾಗುತ್ತದೆ. ವಿಚಿತ್ರವೆಂದರೆ, ಚೇಳಿನ ವಿಷವು ನಾನಾ ಬಗೆಯ ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಕಾರಣ, ಇಂತಹ ವಿಷಕಾರಿ ಜೀವ ಜಂತುವಿನ ವಿಷವನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ!!. ಬೇಸಿಗೆ ಬಂತೆಂದರೆ, ಚೇಳುಗಳ ಕಾಟ ಜಾಸ್ತಿ, ಕಲ್ಲು, ಪೊಟರಿಯಲ್ಲಿ, ಮರಗಳ ತೊಗಟೆಯೊಳಗೆ ವಾಸಿಸುವ ಚೇಳುಗಳು ಹಲವಾರು ಜನರಿಗೆ ಕುಟುಕುತ್ತವೆ. ಇವುಗಳ ಆಹಾರ ಸಣ್ಣ ಸಣ್ಣ ಕೀಟಗಳು. ಕುಟುಕುವುದು ಇವುಗಳ ಸಹಜ ಗುಣ, ತಮ್ಮ ಜೀವ ರಕ್ಷಣೆಗೆ ಈ ತಂತ್ರ.
ಚೇಳು ಕುಟುಕಿದಾಗ ತಕ್ಷಣ ಕೈಗೊಳ್ಳುವ ಪ್ರಮುಖ ಕ್ರಮಗಳು ಹೀಗೆವೆ.
೧. ಚೇಳು ಕುಟುಕಿದ ಮೇಲ್ಭಾಗದಲ್ಲಿ ಅಂಚಿನ ಪಟ್ಟಿ ಅಥವಾ ಚಿಕ್ಕ ಕೈವಸ್ತದಿಂದ ಗಟ್ಟಿಯಾಗಿ ಕಟ್ಟಬೇಕು.
೨. ಐಸ್ ತುಂಡುಗಳನ್ನು ಚೇಳು ಕುಟುಕಿದ ಭಾಗದ ಸುತ್ತಾ ಇಡಬೇಕು.
೩. ಕುಟುಕಿದ ಜಾಗದ ಮೇಲೆ ಈಥೈಲ್ ಕ್ಲೋರೈಡ್ ದ್ರಾವಣವನ್ನು ಸಿಂಪಡಿಸಬೇಕು.
೪. ವಿಷ ದೇಹದ ಇನ್ನಿತರೆ ಭಾಗಗಳಿಗೆ ಹರಡುವುದನ್ನು ತಪ್ಪಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್ನಿಂದ ಕುಯ್ದು, ವಿಷವನ್ನು ಕುಟುಕಿದ ಭಾಗದಿಂದ ಹೊರ ತೆಗೆಯಬೇಕು.
೫. ಇಂಜೆಕ್ಷನ್ ಮೂಲಕ ನೋವು ನಿವಾರಕ ಔಷಧಿ, ಉದಾ: ಪ್ರೊಸೈನ್ ಅಥವಾ ಕರ್ಟಿಸೋನ್(ಯಪಿನೆಪ್ರೀನ್) ಮುಂತಾದ ಔಷಧಿಯನ್ನು ತಜ್ಞವೈದ್ಯರ ಶಿಫಾರಸಿನ ಮೇರೆಗೆ ನೀಡಬೇಕು.
೬. ಅಮೋನಿಯ ದ್ರಾವಣ ದೊರೆತರೆ ಕುಟುಕಿದ ಭಾಗಕ್ಕೆ ಲೇಪಿಸಬೇಕು. ದೇಹದ ಮೃದು ಚರ್ಮದಿಂದ ಕೂಡಿದ ಭಾಗದಲ್ಲಿ ಉದಾ: ಮುಖ, ಎದೆ, ಲಿಂಗಾಂಗಗಳ ಭಾಗದಲ್ಲಿ ತುಂಬಾ ಎಚ್ಚರ ವಹಿಸುವುದು ಅಗತ್ಯ.
೭. ಚಿಕ್ಕ ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡುವುದು ಅವಶ್ಯ.